Send As SMS

Friday, July 02, 2004

O yammi baarammi kUDi hADONa...


ಓ ಯಮ್ಮಿ ಬಾರಮ್ಮಿ ಕೂಡಿ ಹಾಡೋಣ
O yammi baarammi kUDi hADONa - from the Kannada movie, Aparadhi(1974)
excellent song.. Goan style music(SPB and P Susheela)

ಬಾಲ್ಯದ ನೆನಪಾಯ್ತು.. ಅದಕ್ಕಾಗೆ ಈ ವಿಸ್ತೃತ ಟಿಪ್ಪಣಿ. ಇದರಿಂದ ಇನ್ನು ಹಲವರು "Nostalgia" ಗೆ ಹೋಗಬಹುದು.

ನನಗೆ ಈ ಚಿತ್ರ ಬಹಳ ಇಷ್ಟ. (ಅದರಲ್ಲೂ ಈ ಹಾಡು and the sequences before and after this - bus puncture.. figher shetty !!)
1984/85 ರಲ್ಲಿ TVಯಲ್ಲಿ ಬಂದಿತ್ತು.. the week after puTTaNNa's death:(

ಆಗ ಇದ್ದದ್ದೆ ಒಂದೇ channel. ಶನಿವಾರ ಸಂಜೆ ಕನ್ನದ ಚಿತ್ರ. ಇದು ಬರಬೇಕಾದ ಹಿಂದಿನ ದಿನ ಪುಟ್ಟಣ್ಣನವರು ತೀರಿಕೊಂಡರು. ಅದಕ್ಕೆ ರಂಗನಾಯಕಿ ಪ್ರಸಾರ ಮಾಡಿದ್ದರು. "ಮುನ್ನೋಟ"ದಲ್ಲಿ ಅಪರಾಧಿ ಚಿತ್ರದ ತುಣುಕುಗಳನ್ನು ತೋರಿಸಿ, ಬಹಳ ಕಾತರದಿಂದ ಇದ್ವಿ. ಆಗ ಪುಟ್ಟಣ್ಣ ನವರ ಹಾಗು ಅವರ ಚಿತ್ರಗಳ ಹಿರಿಮೆ ತಿಳಿಯದಷ್ಟು ಕಿರಿಯವನು.
ಚೆ.. ಇನ್ನು ಒಂದ್ ವಾರ ಕಾಯಬೇಕ "ಅಪರಾಧಿ" ನೋಡೋಕೆ ಅಂತ ನಾವು ಮಕ್ಕಳೆಲ್ಲ ಬೇಜಾರ್ ಮಾಡ್ಕೊಂಡಿದ್ವಿ :)
ಅಪರಾಧಿ was a very good entertainer. fighter shetty ಇಂದ ಹೆದರಿಸ್ಕೊಳ್ಳೊ ಹುದುಗಿ (Dir: Y R Swamy ಮಗಳು), cid officer ಶ್ರೀನಾಥ್, ಆರತಿ.. climax ಬಹಳ thrilling ಆಗಿತ್ತು. (ನೆನಪಿದೆಯಾ? villain ಯಾರು ಅಂಥ ?). engg.college days ನಲ್ಲಿ ಮತ್ತೆ ನೋಡುವ ಅವಕಾಶ ದೊರೆಯಿತು.. mid 90s ನಲ್ಲಿ.. ಶ್ರೀನಾಥ್ ಆಡಳಿತದ "ಉದಯ" TV ಯಲ್ಲಿ ಅನೇಕ ಬಾರಿ ಬಂದಿತ್ತು :
ಇಂಥ ಚಿತ್ರಗಳ "vcd" ಸಿಕ್ಕರೆ ಚೆನ್ನಾಗಿರುತ್ತೆ. 70s era ದಲ್ಲಿ ಈ ರೀತಿ ಚಿತ್ರಗಳು, ಈ ರೀತಿ ಹಾಡುಗಳದ್ದೆ ಸುಗ್ಗಿ.
ಈ ಚಿತ್ರದ ಇನ್ನೊಂದು ಹಾಡು : "ನಗುವ ನಿನ್ನ ಮೊಗವು ಚೆನ್ನ ಒಲವನು ಕೂಗಿದೆ".. (another spb/p susheela duet) ಚೆನ್ನಾಗಿದೆ.

ps: ಮಂಜಿನ ತೆರೆ.. ಶ್ರೀನಾಥ್ ಅವರ ಇನ್ನೊಂದು suspense ಚಿತ್ರ, ಬಹುಶಃ ಮಂಜುಳ ನಾಯಕಿ