Send As SMS

Sunday, January 29, 2006

ಅಧ್ಯಾಯ ಒಂದು - ದೃಶ್ಯ ೪ : ಅಪಾರ್ಟ್ಮೆಂಟ್ ಅಂಗಳದಲ್ಲಿ - ಬೆಳಿಗ್ಗೆ

ವಿನ್ಸೆಂಟ್ ಮತ್ತು ಜೂಲ್ಸ್, ತಮ್ಮ ಮ್ಯಾಚಿಂಗ್ ಮ್ಯಾಚಿಂಗ್ ಓವರ್‍ಕೋಟ್‍ಗಳಿಂದ ಆ ಗಲೀಜಾದ ಪಾರ್ಕಿಂಗ್ ಲಾಟ್ ಅನ್ನು ಗುಡಿಸ್ಕೊಂಡು ನಡೆಯುತ್ತಿದ್ದಾರೆ. ಆ ಅಪಾರ್ಟ್ಮೆಂಟ್ ಮಲ್ಲೇಪುರದಲ್ಲಿ ಮುಂಚಿ ಇದ್ದ ಹಳೆಯ ಅಪಾರ್ಟ್ಮೆಂಟ್ ನಂತಿದೆ


ವಿನ್ಸೆಂಟ್: ಅವಳ ಹೆಸರೇನೋ ?

ಜೂಲ್ಸ್: ಮಿಯ.

ವಿನ್ಸೆಂಟ್: ಎಲ್ಲಾ ಬಿಟ್ ಈ ಮಾರ್ಸೆಲಸ್ ಗೆ ಹೆಂಗೆ ತಗಲಿಹಾಕೊಂಡ್ಳೋ ?

ಜೂಲ್ಸ್: ನಂಗೊತ್ತಿಲ್ಲ, ಸಾಮಾನ್ಯವಾಗಿ ಜನ ಹೇಗೆ ಒಬ್ಬರನ್ನೊಬ್ಬರು ಭೇಟಿ ಆಗ್ತಾರೋ ಹಾಗೆ. ಇವಳು ನಟಿ ಆಗಿದ್ಳಂತೆ.

ವಿನ್ಸೆಂಟ್: ಇವಳು ನಾ ನೋಡೋ ಅಂಥದ್ದು ಏನಾದರೂ ಮಾಡಿದ್ಳೂ ಅಂತೀಯಾ ?

ಜೂಲ್ಸ್: ಅವಳ್ ಮಾಡಿದ್ ದೊಡ್ಡ ಕೆಲಸ ಅಂದ್ರೆ ಒಂದು ಪೈಲಟ್ ನಲಿದ್ಳು.

ವಿನ್ಸೆಂಟ್: ಪೈಲಟ್ ಅಂದರೆ ?

ಜೂಲ್ಸ್: ಅದೇ, ಟಿ.ವಿಯಲ್ಲಿ ಸೀರಿಯಲ್ಲಿರ್ತಾವಲ್ಲ ?

ವಿನ್ಸೆಂಟ್: ನಾ ಟಿ.ವಿ ನೋಡಲ್ಲ

ಜೂಲ್ಸ್: ಸರಿ, ಆಯು. ದೂರದರ್ಶನವೆಂಬ ವೈಜ್ಞಾನಿಕ ಉಪಕರಣ ಒಂದಿದೆ, ಅದರ ಪರದೆಯ ಮೇಲೆ ಸೀರಿಯಲ್‍ಗಳನ್ನು ತೋರಿಸುತ್ತಾರೆ ಅಂತಾದ್ರು ಗೊತ್ತಿದೆ ತಾನೆ ?

ವಿನ್ಸೆಂಟ್: ಹೂಂ

ಜೂಲ್ಸ್: ಈಗ ಈ ಸೀರಿಯಲ್ಸ್ ಹೇಗೆ ಆಯ್ಕೋತಾರೆ ಗೊತ್ತ? ಮೊದಲು ಒಂದು ಎಪಿಸೋಡ್ ಮಾಡ್ತಾರೆ. ಅದನ್ನ ಪೈಲಟ್ ಅಂತ ಕರೀತಾರೆ. ಮತ್ತೆ ಈ ಒಂದು ಪೈಲಟ್ ಎಪಿಸೋಡನ್ನ ಈ ಸೀರಿಯಲ್‍ಗಳನ್ನ ಯಾರು ಆಯ್ಕೆ ಮಾಡ್ತಾರೋ ಅವರಿಗೆ ತೋರಿಸ್ತಾರೆ. ಆ ಒಂದು ಎಪಿಸೋಡ್ ಎಷ್ಟು ಗಟ್ಟಿಯಾಗಿರುತ್ತೆ ಅನ್ನೋದನ್ನ ನೋಡಿ, ಇನ್ನು ಎಪಿಸೋಡ್‍ಗಳನ್ನ ಮಾಡ್ಬೇಕೋ ಬೇಡವೋ ಅಂತ ನಿರ್ಧಾರ ಮಾಡ್ತಾರೆ. ಒಂದಷ್ಟನ್ನ ಆಯ್ಕೋತಾರೆ, ಒಂದಷ್ಟನ್ನ ತಿಪ್ಪೆಗೆ ಎಸೀತಾರೆ, ಮತ್ತೊಂದಿಷ್ಟು ಏನೂ ಆಗಲ್ಲ. ಈ ಏನೂ ಆಗಲ್ಲ ನೋಡು ಅಂಥ ಒಂದು ಪೈಲಟ್ ಎಪಿಸೋಡ್‍ನಲ್ಲಿ ಇವಳಿದ್ಳು.

ಇಬ್ಬರೂ ಈ ಅಪಾರ್ಟ್ಮೆಂಟ್ ಬಿಳ್ಡಿಂಗನ್ನು ಪ್ರವೇಶಿಸುತ್ತಾರೆ