Send As SMS

Sunday, January 29, 2006

ಅಧ್ಯಾಯ ಒಂದು - ದೃಶ್ಯ ೫: ಅಪಾರ್ಟ್‍ಮೆಂಟ್ ಲಿಫ್ಟ್‍ ಹೊರಗೆ

(ವಿನ್ಸೆಂಟ್ ಮತ್ತು ಜೂಲ್ಸ್, ಅಪಾರ್‍ಟ್ಮೆಂಟ್ ಒಳ ಹೊಕ್ಕಿ, ಲಿಫ್ಟ್ ಕಡೆ ಧಾವಿಸುತ್ತಾರೆ, ಲಿಫ್ಟ್ ಕೆಳಗೆ ಬರುವ ಗುಂಡಿ ಒತ್ತಿ, ಕಾಯುತ್ತಾ ನಿಂತಿದ್ದಾರೆ.)

ಜೂಲ್ಸ್: ಈ ಆನ್ಟ್-ವಾನ್- ರಾಕಮೋರಾ ಗ್ಯಾಪ್ಕ ಇದೆಯ ನಿಂಗೆ ? ಅದೆ ಅರ್ಧ ಕರಿಯ - ಅರ್ಧ ಡುಮೋಯ. ಅವನನ್ನ ಕರಿ ದೆವ್ವ ಅಂತ ಕರೀತಿದ್ದೆ.
(ಸೂಚನೆ: ಡುಮೋಯ - ಈ ಪ್ರಾಂತ್ಯದ ಜನ ಸ್ವಲ್ಪ ಧಡೂತಿಯಾಗಿರುವರು)

ವಿನ್ಸೆಂಟ್: ಹೂಂ ಇರಬಹುದು, ಧಡಿಯ ಅಲ್ವ ?

ಜೂಲ್ಸ್: ಒಂದೇ ಸಲ ಅವನನ್ನು ಧಡಿಯ ಅನ್ನಲ್ಲ. ಆದರೆ ಸ್ವಲ್ಪ ತೂಕದ ಸಮಸ್ಯೆ ಇತ್ತು ಅವನಿಗೆ. ಆ ಕರಿ ಬಢೈದ ಡುಮೋಯದವನಲ್ವ ?

ವಿನ್ಸೆಂಟ್: ನೀ ಯಾರ ಬಗ್ಗೆ ಹೇಳ್ತಿದೀಯ ಅಂತ ಸ್ವಲ್ಪ ತಿಳೀತು ಬಿಡು, ಏನಿವಾಗ ಅವಂದು ?

ಜೂಲ್ಸ್: ಏನಾ ? ಮಾರ್ಸೆಲಸ್ ಸಕ್ಕತ್ ಆಗಿ ಕ್ಯಾ.. ಇಕ್ಕಿದಾನೆ. ಇವೆಲ್ಲಾ ಆಗಿದ್ದು ಆ ಮಾರ್ಸೆಲಸ್ ವಾಲೆಸ್ ಹೆಂಡತಿಯಿಂದ ಅಂತ, ಗಾಳಿ ಸುದ್ದಿ ಬೇರೆ ಇದೆ.

ಲಿಫ್ಟ್ ತೆರೆಯಿತು, ಇಬ್ಬರೂ ಒಳ ಹೊಕ್ಕರು.