Send As SMS

Sunday, January 29, 2006

ಅಧ್ಯಾಯ ೧ - ದೃಶ್ಯ ೩

ಅಧ್ಯಾಯ ೧ - ದೃಶ್ಯ ೩
(ಅಂಬಾಸಡರ್‍ನ ಡಿಕ್ಕಿ ತೆರೆಯುತ್ತದೆ. ಜೂಲ್ಸ್, ವಿನ್ಸೆಂಟ್ ಅದರೊಳಗೆ ಕೈಹಾಕಿ ಎರಡು .೪೫ ಆಟೋಮ್ಯಾಟಿಕ್ ಗನ್‍ಗಳನ್ನು ಲೋಡ್ ಮಾಡಿ ಲಾಕ್ ಮಾಡಿ ಜೇಬಿಗೇರಿಸುತ್ತಾರೆ)

ಜೂಲ್ಸ್: ಇದರ ಬದಲು ಶಾಟ್‍ಗನ್ ಇಟ್ಕೋಬೇಕಿತ್ತು

ವಿನ್ಸೆಂಟ್: ಒಳಗೆ ಎಷ್ಟ್ ಜನ ಅವ್ರೆ ?

ಜೂಲ್ಸ್: ಮೂರು ಅಥ್ವ ನಾಕು

ವಿನ್ಸೆಂಟ್: ನಮ್ ಬಕ್ರಾ ಸೇರಿಸಿ ಹೇಳ್ತಿದೀಯ ?

ಜೂಲ್ಸ್: ಗೊತ್ತಿಲ್ಲ

ವಿನ್ಸೆಂಟ್: ಹಂಗಂದ್ರೆ, ಒಂದೈದ್ ಜನ ಇರಬಹುದಾ ಅಲ್ಲಿ ?

ಜೂಲ್ಸ್: ಇರಬಹುದು

ವಿನ್ಸೆಂಟ್: ಥತ್ ! ಕ್ಯಾ... ಶಾಟ್‍ಗನ್ ತರಬೇಕಿತ್ತು

(ಡಿಕ್ಕಿ ಮುಚ್ತಾರೆ.)