Send As SMS

Monday, June 19, 2006

ಪ್ರಿಯಾ ಚಿತ್ರದ ಸುತ್ತ...

ನೆನಪಿನಂಗಳದಿಂದ..
ಜಾಲಹಳ್ಳಿಯ ಸ್ವಾತಿ ವಿಡಿಯೋ ಅಂಗಡಿಯಲ್ಲಿ ಒಂದು ದಿನ, ೧೯೯೪-೯೫ ಇರಬೇಕು.. ಆವತ್ತಷ್ಟೇ ಈ ಚಿತ್ರದ ಹಾಡುಗಳನ್ನ for the nth time, ಕೇಳಿದ್ದೆ ವಿವಿಧ ಭಾರತಿಯಲ್ಲಿ
ನಾನು: By any chance, ಪ್ರಿಯ ವಿಡಿಯೋ ಕ್ಯಾಸೆಟ್ ಇಟ್ಟಿದೀಯ ಗುರು ?
ಅಂಗಡಿಯವನು: ಹೌದು ಗುರು, ಸಕ್ಕತ್ ಆಗಿದೆ ಪಿಚ್ಚರು, ಅದರಲ್ಲು ಹಾಡುಗಳಂತೂ ಎಕ್ಕಾಮಕ್ಕಾ ಚೆನ್ನಾಗಿದೆ.
ನಾನು: ಶ್ರೀದೇವಿ ಹೀರೋಯಿನ್ ಅಲ್ವಾ ?
ಅಂಗಡಿಯವನು: ಹೂಂ, ಜೊತೆಗೆ ಚೈನಾದವಳೊಬ್ಬಳು ಇದ್ದಾಳೆ, ನಾನೂ ಇನ್ನೊಂದ್ಸಲ ನೋಡ್ಬೇಕು ತುಂಬಾ ದಿನ ಆಗಿತ್ತು ನೋಡಿ

ಪ್ರಿಯಾ ೧೯೭೯ರಲ್ಲಿ ಬಿಡುಗಡೆಯಾದ, ರಜನೀಕಾಂತ್, ಶ್ರೀದೇವಿ, ಅಂಬರೀಶ್, ಶಿವರಾಂ ಹಾಗು ಕೆ.ಎಸ್.ಅಶ್ವಥ್ ನಟಿಸಿದ ಚಿತ್ರ.
ಐದು ಅತ್ಯುತ್ತಮ ಹಾಡುಗಳು, ಎಲ್ಲದರಲ್ಲೂ ಅದ್ಭುತ ಸ್ಟೀರಿಯೋ ಎಫೆಕ್ಟ್‍ಗಳು, ಇದರ ಬಗ್ಗೆ ಕೆ.ಎ.ಫೋರಮ್ಮಿನ ಇಳಯರಾಜ ಡಿಸ್ಕೋಗ್ರಾಫಿಯಲ್ಲಿ ಮುಂದುವರೆಸುವೆ.

ಸುಮಾರು ಎರಡು ವರ್ಷಗಳಿಂದ ಈ ಚಿತ್ರದ ಎಲ್ಲಾ ಹಾಡುಗಳನ್ನು ಕೆ.ಎ.ರೇಡಿಯೋದಲ್ಲಿ ಓಡಿಸ್ತಾನೆ ಇದೀವಿ. ಹೇ ಕವಿತೆ ನೀನು, ನನ್ನಲಿ ನೀನಾಗಿ, ಓ ಪ್ರಿಯಾ, ಡಾರ್ಲಿಂಗ್ ಐ ಲವ್ ಯೂ, ಸಾಗರದಾಚೆಯ ಸೊಬಗಿನ ನಾಡನು ಕಂಡೆ - ಇವು ಈ ಚಿತ್ರದ ಐದು ಹಾಡುಗಳು.

ಈ ಚಿತ್ರವನ್ನು ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲದಲ್ಲಿ ತಯಾರಿಸಲಾಯಿತು. ಇದರ ನಿರ್ಮಾಪಕ/ನಿರ್ದೇಶಕರು ಎಸ್.ಪಿ.ಮುತ್ತುರಾಮನ್, ತಮಿಳು ಚಿತ್ರಜಗತ್ತಿನವರು. ಎರಡಲ್ಲೂ ನಾಯಕ/ನಾಯಕಿಯರು ರಜನಿಕಾಂತ್, "ಚೈನಾ ಹುಡುಗಿ", ಅಂಬರೀಷ್, ಶ್ರೀದೇವಿ. ಅಂಬರೀಷ್‍ಗೆ ಹೆಚ್ಚು ಪ್ರಾಮುಖ್ಯತೆಯಿಲ್ಲ, ಆಗಿನ್ನೂ ಅರಳುತ್ತಿದ್ದ ಪ್ರತಿಭೆಯಲ್ಲವೇ. ಒಂದೂವರೆ ಹಾಡುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. (ಯಾರಾದರೂ ತಮಿಳು ಬಾಂಧವರು ಅಪ್ಪಿ-ತಪ್ಪಿ "ಹೇ, ಈ ಹಾಡು ತಮಿಳಲ್ಲಿತ್ತೂ.." ಎಂದರೆ ಈ ಮಾಹಿತಿ ನೀಡಬಹುದು.)

ಪೂರಕ ಮಾಹಿತಿ ೧: ಶ್ರೀದೇವಿ ಕನ್ನಡದಲ್ಲಿ ಬಾಲನಟಿಯಾಗಿ ಭಕ್ತ ಕುಂಬಾರ, ಬಾಲಭಾರತ, ಸಂಪೂರ್ಣ ರಾಮಾಯಣ, ಯಶೋಧ ಕೃಷ್ಣ ಚಿತ್ರಗಳಲ್ಲಿ, ನಾಯಕಿಯಾಗಿ ಪ್ರಿಯಾ ಚಿತ್ರದಲ್ಲಿ ಹಾಗು ಪೋಷಕ ನಟಿಯಾಗಿ ಹೆಣ್ಣು ಸಂಸಾರದ ಕಣ್ಣು ಚಿತ್ರದಲ್ಲಿ ನಟಿಸಿದ್ದಾರೆ.

ಪೂರಕ ಮಾಹಿತಿ ೨: ಸುಧಾ ವಾರಪತ್ರಿಕೆಯಲ್ಲಿ ಬರುತ್ತಿದ್ದ "ನನ್ನ ನಾ ಕಂಡಂತೆ" ಶೀರ್ಷಿಕೆಯಡಿ ಪ್ರಕಟವಾಗುತ್ತಿದ್ದ ನಟ/ನಟಿಯರ ಆತ್ಮಚರಿತ್ರೆ ಧಾರಾವಾಹಿಗಳಲ್ಲಿ, ಅಶ್ವಥ್ ಅವರದ್ದು ಒಂದು. ಅದರಲ್ಲಿ ಈ ಚಿತ್ರದ ಬಗ್ಗೆ ವಿಶೇಷವಾಗಿ ಸಿಂಗಾಪುರದ ಚಿತ್ರೀಕರಣ ಹಾಗು ಅನುಭವಗಳ ಬಗ್ಗೆ ಬರೆದಿದ್ದರು.