Send As SMS

Sunday, January 29, 2006

ಅಧ್ಯಾಯ ಒಂದು - ದೃಶ್ಯ ೬ - ಲಿಫ್ಟ್ ಒಳಗೆ

ವಿನ್ಸೆಂಟ್: ಏನ್ ಕ್ಯಾ... ಎಲ್ಲಾ ಮುಗಿಸೇ ಬಿಟ್ನ ?

ಜೂಲ್ಸ್: ಇಲ್ಲ ಇಲ್ಲ ಇಲ್ಲ, ಅಷ್ಟೇನು ಸೀನ್ ಇಲ್ಲ

ವಿನ್ಸೆಂಟ್: ಮತ್ತೆ ?

ಜೂಲ್ಸ್: ಅವಳ ಕಾಲಿಗೆ ಮಸಾಜ್ ಮಾಡಿದ

ವಿನ್ಸೆಂಟ್: ಕಾಲಿಗೆ ಮಸಾಜ್ ಆ !

ಜೂಲ್ಸ್ (ತಲೆ ಆಡಿಸುತ್ತಾ) - ಹೌದು.

ವಿನ್ಸೆಂಟ್: ಅಷ್ಟೆ ನಾ ?

ಜೂಲ್ಸ್ (ತಲೆ ಆಡಿಸುತ್ತಾ) - ಹೌದು.

ವಿನ್ಸೆಂಟ್: ಮಾರ್ಸೆಲಸ್ ಏನ್ ಮಾಡಿದ ?

ಜೂಲ್ಸ್: ಅವನ ಮನೆಗೆ ಒಂದಿಬ್ರು ಸಿಸ್ಯಂದ್ರನ್ನ ಕಳಿಸಿದ. ಅವನ ಮನೆ ಬಾಲ್ಕನಿಗೆ ಎತ್ತಾಕೊಂಡ್ ಹೋಗಿ, ಕಿಟಕಿಯಿಂದಾಚೆ ಅಂಡಿಡ್ಕಂಡ್ ತಳ್ಬಿಟ್ರು. ಕರಿಹೈದ ೪ ಮಹಡಿ ಕೆಳಗ್ಬಂದು ಬಿದ್ದಿದ್ದ. ಈ ಕೆಳಗೆ ಒಂದ್ ಗಾರ್ಡನ್ ಮಾಡಿಟ್ಟಿದ್ದರು. ಅದೇ ಈ ಗ್ರೀನ್‍ಹೌಸು ಅಂತ ಮಾಡಿರ್ತಾರಲ್ಲ, ಕರಿ ಬಡ್ಡೈದ ಬಂದು ರಪ್ ಅಂತ ಬಿದ್ದ ಅದ್ರ ಮೇಲೆ. ಅದಾದಾಗಿಂದ ಬ್ಯ ಬ್ಯ ಬ್ಯ ಅಂತಿದಾನೆ, ಮಾತಾಡೋಕು ಸಾಯ್ತಿದಾನೆ

(ಲಿಫ್ಡ್ ಬಾಗಿಲು ತೆರೆಯುತ್ತಿದ್ದಂತೆ, ಇಬ್ಬರೂ ಹೊರಗೆ ಬಂದರು.)

ವಿನ್ಸೆಂಟ್: ನಾಚಿಕ್-ಗೇಡು !